ಹೊಟ್ಟೆಯ ಬೊಜ್ಜು ಬಗ್ಗೆ ವಿಷಯ

          😱ಹೊಟ್ಟೆಯ ಬೊಜ್ಜು ಬಗ್ಗೆ ವಿಚಾರಣೆ😱

ಹೊಟ್ಟೆಯ ಬೊಜ್ಜು ಇರಬೇತು ಜಾಗ್ರತೆ ಹಾಗೂ ಇದರ ಬಗ್ಗೆ ಪ್ರತಿಪಾದಿಸಿದವರು ಡಾ.ವೀಣಾ.ಎಸ್.ಭಟ್ಟ ರವರು

                    ನನಗೆ 36 ವರ್ಷ.ಎರಡೂ ಹೆರಿಗೆ ನಾರ್ಮಲ್ ಆಗಿದ್ದು, ಎರಡನೇ ಮಗುವಿಗೆ ಈಗ 5 ವರ್ಷ. ದಿನಾ ವಾಕಿಂಗ್‌ ಮಾಡುತ್ತೇನೆ. ಹೆಚ್ಚೇನೂ ತಿನ್ನುವುದಿಲ್ಲ. ತುಂಬಾ ದಪ್ಪವೂ ಇಲ್ಲ. ಆದರೂ ಹೊಟ್ಟೆಯ ಕೆಳಭಾಗ ಮಾತ್ರಯಾವಾಗಲೂ ಉಬ್ಬಿದ ಹಾಗೇ ಇರುತ್ತದೆ. ಕೆಳಗೆ ಭಾರಭಾರ ಅನ್ನಿಸುತ್ತದೆ. ಎಲ್ಲರೂ 'ಮತ್ತೆ ವಿಶೇಷಾನಾ?' ಎಂದು ಕೇಳುತ್ತಾರೆ. ನನ್ನ ಹೆರಿಗೆ ಮಾಡಿಸಿದ ಡಾಕ್ಟ‌ರ್'ಅದು ಹಾಗೇ ಇರುತ್ತದೆ' ಎಂದಿದ್ದಾರೆ. ಹಾಗಿದ್ದರೆ ಈ ಹೊಟ್ಟೆ ಬೊಜ್ಜು ಕರಗಿಸಲುಯಾವ ವಿಧಾನವೂ ಇಲ್ಲವೇ?

ಪರಿಮಳಾ, ಕೊಪ್ಪಳ ಹೆರಿಗೆ ನಂತರ ಹೆಚ್ಚಿನ ಮಹಿಳೆಯರಿಗೆ ಕೆಳಹೊಟ್ಟೆ ಸ್ವಲ್ಪ ಉಬ್ಬಿದಂತೆ ಇರುತ್ತದೆ. ಯಾಕೆಂದರೆ ಮೊದಲು ಸಣ್ಣದಾಗಿದ್ದ ಗರ್ಭಕೋಶವು ಗರ್ಭ-ಧಾರಣೆಯಲ್ಲಿ ಅತಿಯಾಗಿ ಹಿಗ್ಗುತ್ತದೆ. ಸುಮಾರು 3 ಕೆ.ಜಿ.ಯಮಗು, ಗರ್ಭಜಲ, ಪ್ಲಾಸೆಂಟ ಎಲ್ಲ ಸೇರಿ ಒಟ್ಟು ಐದಾರು ಕೆ.ಜಿ.ಯಷ್ಟನ್ನು ಒಳಗಿಟ್ಟುಕೊಂಡು ಹೆರಿಗೆಯವರೆಗೆ ಕಾಪಾಡಬೇಕಲ್ಲವೇ? ಹೆರಿಗೆಯ ನಂತರ ಗರ್ಭಕೋಶ ಸಹಜಸ್ಥಿತಿಗೆ ಬರುತ್ತದಾದರೂ, ಸಂಪೂರ್ಣವಾಗಿ ಮೊದಲಿನ ಸ್ಥಿತಿಗೆ ಬರುವುದಿಲ್ಲ.

ಹೊಟ್ಟೆಯ ಸಮಾನಾಂತರವಾಗಿ ಎರಡು ಕಡೆ ರೆಕ್ಟಸ್ ಅಬ್ಬೊಮಿನಿಸ್ ಎಂಬ ಸ್ನಾಯುಗಳಿದ್ದು, ಗರ್ಭಪೂರ್ವ ಹಂತದಲ್ಲಿ ಇವುಗಳ ನಡುವೆ ಹೆಚ್ಚು ಅಂತರ ಇರುವುದಿಲ್ಲ. ಈ ಸ್ನಾಯುಗಳು

ದುರ್ಬಲವಾಗಿ ಇರುವವರಲ್ಲಿ, ಕೆಲವೊಮ್ಮೆ ಅವಳಿ, ತ್ರಿವಳಿ ಮಕ್ಕಳು ಹೊಟ್ಟೆಯೊಳಗೆ ಬೆಳೆಯು-ತ್ತಿದ್ದಾಗ, ಮಗುವಿನ ತೂಕ ಅತಿಯಾಗಿದ್ದಾಗ, ಗರ್ಭಜಲದ ಪ್ರಮಾಣ ಹೆಚ್ಚಾಗಿದ್ದಾಗ ಈ ಸ್ನಾಯುಗಳು ಹಿಗ್ಗಿ, ಎರಡರ ನಡುವಿನ ಅಂತರ ಹೆಚ್ಚಾಗುತ್ತದೆ. ಆಗ ಆಮಧ್ಯದ ಜಾಗದಲ್ಲಿ ಹೊಟ್ಟೆಯ ಸ್ನಾಯುಗಳು ದುರ್ಬಲಗೊಳ್ಳು-ತ್ತವೆ. ಆಜಾಗದಲ್ಲಿ ಹೊಟ್ಟೆಯ ಚರ್ಮದ ಕೆಳಗೆ ಕರುಳಿನ ಭಾಗ ಆಕ್ರಮಿಸಿಕೊಂಡು, ಹೊಟ್ಟೆ ಉಬ್ಬಿ ಸದಾ ಐದು ತಿಂಗಳು ಗರ್ಭಿಣಿಯರ ಹಾಗೆ ಕಾಣಿಸುತ್ತದೆ.

ಇನ್ನು ಕೆಲವರಲ್ಲಿ ಹೊಟ್ಟೆಯ ಒಳ ಅಂಗಗಳಲ್ಲಿ ಕೊಬ್ಬು ಶೇಖರಣೆ ಹೆಚ್ಚಿದ್ದಾಗ ಕೈಕಾಲು ಸಣ್ಣಗಿದ್ದರೂ ಹೊಟ್ಟೆಯ ಭಾಗ ದಪ್ಪ-ಗಿರುತ್ತದೆ. ಇದನ್ನು ಉದರದ ಬೊಜ್ಜು ಅಥವಾ ಆಂಡ್ರಾಯ್ಡ್ ಒಬೇಸಿಟಿ ಎನ್ನುತ್ತಾರೆ. ಈ ಬೊಜ್ಜು ಹಾರ್ಮೋನ್ ಉತ್ಪಾದಿಸುವ ಅಂಗದ ಹಾಗೆ ಕೆಲಸ ಮಾಡಿ ಇನ್ಸುಲಿನ್ ಪ್ರತಿರೋಧ ಹೆಚ್ಚಿಸುತ್ತದೆ. ಇದು ದೀರ್ಘಾವಧಿ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಪಿ.ಸಿ.ಒ.ಡಿ., ಹೃದ್ರೋಗ, ಏರುರಕ್ತ-ದೊತ್ತಡದಂತಹವುಗಳಿಗೆ ಎಡೆಮಾಡಿಕೊಡುವ ಹಾಗಾಗಿ, ಈ ಬಗ್ಗೆ ಜಾಗ್ರತೆಯಿಂದ ಇರಿ. ಪ್ರತಿದಿನ ಕನಿಷ್ಠ 20-30 ನಿಮಿಷ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುವ ಕೆಲವು ಆಸನಗಳನ್ನು ಮಾಡಿದರೆ ಇಡೀ ಶರೀರದ ತೂಕ ಜೊತೆಗೆ ಉದರದ ಬೊಜ್ಜು ಎರಡನ್ನೂ ನಿಯಂತ್ರಣದಲ್ಲಿ ಇಡಬಹುದು. ನಿಂತುಕೊಂಡಾಗ, ಓಡಾಡುವಾಗ

ಸಾಧ್ಯವಾದಷ್ಟೂ ಹೊಟ್ಟೆಯ ಸ್ನಾಯುಗಳನ್ನು ಒಳಗೆಳೆದುಕೊಳ್ಳುತ್ತಾ ಇದ್ದರೆ ಅವುಗಳ ಟೋನ್ ಹೆಚ್ಚುತ್ತಾ ಹೋಗುತ್ತದೆ. ಇದು ಹೊಟ್ಟೆಯ ಬೊಜ್ಜಿನ ನಿರ್ವಹಣೆಗೆ ಸಹಾಯಕ. ಪ್ರತಿ ಮಹಿಳೆಯೂ ಪೆಲ್ವಿಕ್ ಸ್ನಾಯುಗಳ ಬಲ ಕಾಪಾಡಿಕೊಳ್ಳಲು ಕೆಗಲ್ಸ್ ವ್ಯಾಯಾಮವನ್ನು ಸರಿಯಾದ ರೀತಿಯಲ್ಲಿ ಪ್ರತಿನಿತ್ಯ ಮಾಡಿದಾಗ, ತೂಕ ನಿಯಂತ್ರಣದ ಜೊತೆಗೆ ಲೈಂಗಿಕ ಜೀವನವೂ ಚೆನ್ನಾಗಿರುತ್ತದೆ.

Comments